Monday, August 8, 2011

ಮರಳಿ ಮಣ್ಣಿಗೆ

ಇದು ನಾನು ಓದಿದ ಕಾರಂತರ ಎರೆಡನೆಯ ಕಾದಂಬರಿ ಮೊದಲು ಜ್ಞಾನಪೀಠ ಪುರಸ್ಕೃತ  "ಮೂಕಜ್ಜಿಯ ಕನಸುಗಳು"
ಮೊದಮೊದಲಿಗೆ ನಾನು ದಿನಕ್ಕೆ ೫-೬ ಪುಟಗಳನ್ನು ಓದುತ್ತಿದ್ದ ನಾನು ಕಥೆಯು ತನ್ನ ಉತ್ತುಂಗಕ್ಕೆ ಏರಿದಾಗ ಸುಮಾರು ೬೦ ಪುಟಗಳನ್ನು ಒಂದೇ ದಿನಕ್ಕೆ ಓದಿದ್ದುಂಟು . ಒಟ್ಟು ಪುಟಗಳು 417



"ಮರಳಿ ಮಣ್ಣಿಗೆ" ಕಾರಂತರ ಒಂದು ಅದ್ಭುತ ಕಾಲ್ಪನಿಕ ಕಥೆಯಾದರು ಇಂದಿನ ಜಗತ್ತಿನ ವಾಸ್ತವ್ಯದ ಕಥೆಯೇ ಸರಿ . ಅದನ್ನು ಬರೆದುದು ಸುಮಾರು 1930 's ನಲ್ಲೆ ಇದ್ದರು ಅದು ಇಂದಿಗೂ ಕಾಣಲ್ಪಡುವ ಒಂದು ನೈಜ ಬದುಕು ಎಂದೆ ಭಾವಿಸುತ್ತೇನೆ.

ಕಥೆಯು ಮಲೆನಾಡಿನ ಕಡಲತೀರದ ಜನರು ಅನುಭಿವಿಸುವ ಒಂದು ಸುಂದರ ಜೀವನದ ಚಿತ್ರಣವನ್ನು ಬಣ್ಣಿಸುತ್ತಾ ಸಾಗುತ್ತದೆ ಅದರ ಜೊತೆಗೇ ಅಲ್ಲಿನ ಜನರು ನಡೆಸುವ ತಮ್ಮ ಜೀವನದೊಂದಿಗೆ ಮಳೆಗಾಲದಲ್ಲಿ ನಡೆಸುವ ಸಂಘರ್ಷವನ್ನು ಬಿಂಬಿಸುತ್ತಾ ಸಾಗುತ್ತದೆ ಇದರ ಮಧ್ಯೆ ಅಲ್ಲಿನ ಒಬ್ಬ ವೈದಿಕ "ರಾಮ ಐತಾಳ" ರ ಮನೆಯ ಕಥೆಯ ಸುತ್ತ ಸುತ್ತುತ ಬರುತ್ತದೆ. ಮುಂದೆ ಕಥೆಯು ಐತಾಳರು ಆಗುವ ಎರೆಡು ಮದುವೆ ಮತ್ತು ಅವರು ಮತ್ತು ಅವರ ಮನೆಯವರು ಪಡುವ ಸುಖ ದುಃಖಗಳು ಹೇಳುತ್ತಾ ಸಾಗಿದರೆ, ಇತ್ತ ಐತಾಳರ ಎರೆಡನೆಯ ಹೆಂಡತಿಯ ಮಗ ಲಚ್ಚನ ಕಥೆ ಶುರುವಾಗುತ್ತದೆ. ಅವನು ಕಂಡರೆ ಎಲ್ಲರು ಮುದ್ದು ಮಾಡುವವರೇ ಆಗಿರುತ್ತಾರೆ, ಏಕೆಂದರೆ ಅದು ಐತಾಳರ ಏಕೈಕ ಸಂತಾನ .
ಹೀಗೆ ಇರುವಾಗ ಎಲ್ಲರು ತಮ್ಮ ಪ್ರೀತಿಯನ್ನು ಧಾರೆ ಎರೆದು ಅವನನ್ನು ಮಲೆನಾಡ ಕಷ್ಟದ ಜೀವನವನ್ನೇ ಕಾಣದ ಹಾಗೆ ಬೆಳೆಸುತ್ತಾರೆ. ತಮ್ಮ ಮಗ ಚೆನ್ನಾಗಿ ಓದಿ ದೊಡ್ದವನಗಲಿ ಎಂದು ತಿಳಿದು ಪೇಟೆಗೆ ಓದಲು ಕಳುಹಿಸಿದರೆ ದುಷ್ಟರ ಸಹವಾಸದಿಂದ ಕೆಟ್ಟ ಹಾದಿಯನ್ನು ಹಿಡಿದರೆ ಮುಂದೆ ಅವನ ಮಗನಾಗಿ ರಾಮ ಹುಟ್ಟಿ ಬಂದು ಹೇಗೆ ತನ್ನ ತಂದೆಗೆ ತದ್ವಿರುದ್ದಿಯದ ಮತ್ತು ಸ್ವಾಭಿಮಾನದ ಜೀವನ ನಡೆಸುತ್ತಾನೆ, ಆದರೆ ಲಚ್ಚ ಹೋದದ್ದೇ ಹೋದ ಅವನ ಹೆಂಡತಿಯ ನಾಗವೇಣಿ ಜೀವನವೆಲ್ಲ ಕಣ್ಣೇರಲ್ಲೇ ಕಳೆಯುತ್ತಾಳೆ, ಅವನ ಮಗನಿಗಂತೂ ಹೊಸ ಬಟ್ಟೆಯೂ ಅಂದರೆ ಏನೆಂದೇ ತಿಳಿದಿರುವುದಿಲ್ಲ. ಹೀಗೆ ಇದ್ದು ಅವನು ತನ್ನ ಬಿ.ಎ ಮದ್ರಾಸಿನಲ್ಲಿ ಮುಗಿಸಿ ಬಂದು ಬೆಂಗಳೂರಲ್ಲಿ ಹೋಟೆಲು ಕೆಲಸ ಮಾಡಿ ಕೊನೆಗೆ ಕೆಲಸ ಸಿಗದೇ ಬೊಂಬಾಯಿ ಗೆ ಕೂಡ ಕೆಲಸವನ್ನು ಅರೆಸಿ ಹೊರಡುತ್ತಾನೆ.
ಆದರೆ ಕೊನೆಗೆ ಅವನು ಇವೆಲ್ಲವನ್ನೂ ಬಿಟ್ಟು ಮಣ್ಣಿನ ಮಗನಾಗಿ ಬಂದು ತನ್ನ ಊರಲ್ಲಿ ೧೫ ರುಪಾಯಿಗೆ ಸ್ಕೂಲ್ ಮೇಷ್ಟ್ರಿನ ಕೆಲಸ ಮಾಡುತ್ತ ತನ್ನ ಗದ್ದೆಯನ್ನು ಸಂಸಾರವನ್ನು ಸಾಗಿಸುತ್ತಾನೆ ಅನ್ನುವುದು ಓದಲೇ ಬೇಕಾದ ಸಂಗತಿ.

ಈ ರಾಮನಿಗೆ ಕಡಲು ಎಂದರೆ ಏನೋ ಒಂದು ತರಹದ ಹುಚ್ಚು ,ನೋಡಿದಾಗಲೆಲ್ಲ ಮನೋಲ್ಲಾಸ ತರಿಸುತ್ತದೆ, ಊರಿಗೆ ಬಂದಾಗಲೆಲ್ಲ ಅಮ್ಮ ನಾಗಿ ಯನ್ನು ಕರೆದುಕೊಡು ಕಡಲ ಹತ್ತಿರ ಹೊಗೆ ಬಿಡುತ್ತಾನೆ, ರಾತ್ರಿ ಎಲ್ಲ ಕುಳಿತು ಏನು ಏನೋ ಮಾತಾಡುತ್ತಾರೆ ಇಬ್ಬರು. ಅವಳಿಗೆ ಒಂದು ತರಹದ ಆಶ್ಚರ್ಯ "ಇವನು ಕಡಲನ್ನು ಬಿಟ್ಟು ಆ ಬಯಲು ಊರಿನಲ್ಲಿ ಹೇಗೆ ಬದುಕುತ್ತಾನೆ" ಎಂದು. ಏನೇ ಆಗಲಿ ರಾಮನ ಕಣ್ಣಿಂದ ಕಾಣುವ ಮಲೆನಾಡು ಮತ್ತು ಕಡಲಿಗೂ ಅವನಿಗೂ ಇರುವ ಸಂಬಂಧ ಬಣ್ಣಿಸಿರುವ ರೀತಿಗೆ ಕಾರಂತರಿಗೆ ನನ್ನ ಅನಂತ ನಮನ ..

ನನ್ನ ಮುಂದಿನ ಪಯಣವು ಕುವೆಂಪು ರವರ "ಮಲೆಗಳಲ್ಲಿ ಮದುಮಗಳು" ಎಂದು ಅಂದುಕೊಂಡಿದ್ದೇನೆ, ಇದೆ ಅಲ್ಲದಿದ್ದರೂ ಬೇರೆ ಯಾವುದಾದರು ಓದಿ ಮತ್ತೆ ಇದನ್ನು ಒದೆ ತೀರುತ್ತೇನೆ.  :-)

what did you feel after reading