Saturday, November 5, 2011

Back to korea 3rd time.. this time it is Suwon i wish to see Snow fall

ಈ ಬಾರಿ ನನ್ನ ಬ್ಲಾಗನ್ನು ಕನ್ನಡದಲ್ಲಿ ಬರೆಯಲು ಪ್ರಯತ್ನಿಸುತ್ತೇನೆ!!
ಮತ್ತು ಇದು ನನ್ನ ಎರಡನೇ ಕನ್ನಡ ಬ್ಲಾಗ್ ಮರಳಿ ಮಣ್ಣಿಗೆ ಪುಸ್ತಕದ ವಿಶ್ಲೇಷಣೆ ನಂತರ. :-)

ಇಂದಿಗೆ ನಾನು ಬಂದು ಸುಮಾರು ಹತ್ತು ಹನ್ನೆರಡು ದಿನಗಳೇ ಕಳೆದು ಹೋದವು ಇದುವರೆಗೂ ಇಂದು ಬರೆಯೋಣ ನಾಳೆ ಬರೆಯೋಣ ಎಂದೇ ದಿನ ತಳ್ಳುತ್ತ ಬಂದಿದ್ದೇನೆ.

ಈ ಪ್ರಯಾಣದ ಹಿಂದೆ ನನ್ನದೊಂದು ಚಿಕ್ಕ ಕಥೆ ಇದೆ ಏನೆಂದರೆ, ನಾನು ನನ್ನ ಜೀವನದ ಮಹದಾಸೆ "ಹಿಮಾಲಯ ಪ್ರವಾಸ" ವನ್ನು ಒತ್ತೆ ಇಟ್ಟು ಬಂದಿದ್ದೇನೆ ಹೆಂಗೆ ಎನ್ನುತ್ತೀರಾ?
ಸುಮಾರು ಒಂದೂವರೆ ತಿಂಗಳ ಹಿಂದೆಯೇ YOUTH  HOSTEL ಏರ್ಪಡಿಸಿರುವ dalhousie trek ಗೆ ನಾನು ಎಲ್ಲ ಸಿದ್ಧತೆ ನಡಿಸಿದ್ದೆ.
youth hostel charges = 3000/-
ದೆಹಲಿಗೆ ನನ್ನ ಹೋಗಿ ಬರುವ ರೈಲಿನ ಟಿಕೆಟು  reserve ಮಾಡಿದ್ದೇನೆ (3000rs)
ಮತ್ತು ಅದಕ್ಕೆ ಹೋಗಿ ಬರುವುದಕ್ಕೆ ಎರೆಡು ವಾರ (dec 23 - jan 7) ರಜೆಯನ್ನು ಕೂಡ ಕೇಳಿದ್ದೇನೆ.
 ಆದರೆ ಒಂದು ದಿನ ನನ್ನ manager ನನಗೆ ಬಂದು ನೀನು ಕೊರೆಅ ಗೆ ಹೋಗ ಬಯಸುತ್ತಿಯ ಎಂದಾಗ ನನಗೆ ಎರೆಡು ರೀತಿಯ ಅನುಭುವ, ಖುಷಿ ಮತ್ತು ದುಃಖ ಏನು ಮಾಡಲಿ ಎಂದು, ಕೊನೆಗೆ ಹೇಳಿದೆ ನಾನು ನನ್ನ plan ಮಾಡಿ ಆಗಿದೆ ಅಲ್ವ ಎಂದು ಅದಕ್ಕೆ ಅವರು ಹೇಳಿದ್ದು ನೀನು ಅಷ್ಟರಲ್ಲಿ ವಾಪಾಸ್ ಬರುತ್ತಿಯ ಎಂದು. ನಾನು ಅದೇ ಖುಷಿಯಲ್ಲಿ ಹೂ ಎಂದು ಬಿಟ್ಟೆ.
ಕೊನೆಗೆ ಇಲ್ಲಿ ಬಂದರೆ ಹೋಗುವ ಸೂಚನೆಗಳು ಏನು ಕಾಣುತ್ತಿಲ್ಲವೇ ಇಲ್ಲ. 


ಹೇಗೂ ನನಗೆ Snow fall ನೋಡುವ ಆಸೆ, ಅದನ್ನು ಇಲ್ಲೇ ಪುಕ್ಕತ್ತೆಯಲ್ಲಿ ನೋಡಬಹುದು. ಅದಕ್ಕೆ ನಾನು ಇದ್ದಾರೆ ಮೂರು ತಿಂಗಳು ಪೂರ್ತಿ ಇರುವೆನು ಇಲ್ಲವಾದರೆ dec23 ಒಳಗೆ ನಾನು ವಾಪಾಸ್ ಹೋಗುವೆನು ಎಂದು ನಿರ್ಧರಿಸಿದ್ದೇನೆ , ಇದನ್ನು dec ತಿಂಗಳಲ್ಲಿ ಇಥ್ಯರ್ಥೆ ಆಗುತ್ತದೆ. ಏನಾಗುತ್ತದೆಯೋ ಏನೋ?

ಸರಿ ವಾಪಾಸ್ ಪ್ರಯಾಣದ ಬಗ್ಗೆ ಬರೋಣ:

ಅಂದು oct16 ನನ್ನ ಫ್ಲೈಟ್ ಬೆಂಗಳೂರಿನಿಂದ ಬೆಳಗಿನ ಜಾವ 2:30 ಗೆ hongkong ಇತ್ತು, ಅಲ್ಲಿಂದ seoul ಗೆ ನಾನು ಮುಂದಿನ ಅಂದರೆ oct17 ಸಾಯಂಕಾಲ 6.30 ಗೆ ಸೇರುವ plan ಇತ್ತು. ಅದೃಷ್ಟಕ್ಕೆ ಎಲ್ಲಿಯೂ ತಡವಾಗದೇ ನಿಗದಿತ ಸಮಯದಲ್ಲಿ ಸೇರಿದೆ. hongkong ನಲ್ಲಿ ಸುಮಾರು 4 ಘಂಟೆಯ ಕಾಲ ಕಳೆಯಬೇಕಿತ್ತು, ಅಲ್ಲಿ ಇಲ್ಲಿ ಸುತ್ತಾಡಿ, ಕೊನೆಗೆ ಹೋಗಿ ಬರುವ ಏರೋಪ್ಲೇನ್ ಗಳನ್ನೂ ನೋಡಿ ಹೇಗೋ ಕಲ ಕಳೆದು ಹೋಯ್ತು .


ಹಂಗು ಹಿಂಗು ಕೊನೆಗೆ seoul ಬಂತು, ನಾನು ಅಲ್ಲಿಂದ ಹೊರಗೆ ಬಂದು ಸುಮಾರು 12000 wons ಕೊಟ್ಟು ಬಸ್ ಟಿಕೆಟು ಪಡೆದು ಸುಮಾರು ರಾತ್ರಿ 7 ಘಂಟೆಗೆ ಹೊರಟೆವು,  ಅಲ್ಲಿಂದ 1.5 ಘಂಟೆ ಪ್ರಯಾಣವಿತ್ತು. ನನಗನಿಸಿದಂತೆ ಆ ಏರೋಪ್ಲೇನ್ ಸೀಟ್ ಕಿಂತ ಇಲ್ಲಿ ಬಸ್ ಸೀಟೇ ಎಷ್ಟೋ ಮೇಲು ಅಂತ. 
ಕೊನೆಗೆ ನಮ್ಮ ಊರು ಬಂದಿತು, ಬಸ್ ಇಳಿದ ತಕ್ಷಣವೇ ನಮಗೆ ನಮ್ಮ ಹೊಟೇಲಿನವರು ಕರೆದೊಯ್ಯಲು ಕಾಯುತ್ತಿದರು.
ಅಲ್ಲಿಂದ ಕೇವಲ ಹತ್ತು ನಿಮಿಷದಲ್ಲಿ ನಮ್ಮ ಹೋಟೆಲಿಗೆ ಬಂದು ಇಳಿದೆವು, ನಮಗೋಸ್ಕರ ರಾತ್ರಿಯ ಬಿಸಿ ಬಿಸಿ ಊಟ ಕಾಯುತ್ತಿತ್ತು.
 ಊಟ ಕತ್ತರಿಸಿ ಆಮೇಲೆ ಹೋಗಿ ಎಂದು ಹೇಳಿದ ನಮ್ಮ ಅಡಿಗೆ ಭಟ್ಟ ಅಂದರೆ ಅಲ್ಲಿನ ಭಾಷೆಯಲ್ಲಿ ಕುಕ್. ನಮ್ಮ ಊಟವು ಮುಗಿಯಿತು ನಂತರ ನನ್ನ ರೂಮಿಗೆ ಕರೆದುಕೊಂಡು ಹೋದ, ಅಲ್ಲಿ ನೋಡಿದರೆ ನನ್ನ ಜೊತೆ ಅಶೋಕ್ ಕೂಡ ಇದ್ದಾನೆ. ಕಂಡು ಒಂದು ರೀತಿ ಸಮಾಧಾನವೇ ಆಯಿತು. ಆದರು ಅವನಿಂದ ನನಗೆ ಇಲ್ಲಿಯ ತನಕ ಏನೂ ಪ್ರಯೋಜನವಾದಂತೆ ಕಂಡು ಬರುತ್ತಿಲ್ಲ, ಅಂದರೆ ಹೊರಗೆ ತಿರುಗಾಡುವ ವಿಷಯದಲ್ಲಿ. ಇಲ್ಲಿಯವರೆಗು ಎಲ್ಲಿಯೂ ಹೊರಗೆ ಹೊಗೇ ಇಲ್ಲ.
ಮುಂದಿನ ದಿನ ನನ್ನ ಕೆಲಸ ಶುರು. ಬೆಳಿಗ್ಗೆ ನಾನು alarm ಇಟ್ಟಿದ್ದೆ 7 ಘಂಟೆಗೆ, ಆದರೆ ಎದ್ದಿದ್ದು 8.30 ಘಂಟೆಗೆ ವಾಚು ನೋಡಿದ ತಕ್ಷಣ ನನ್ನ ನಿದ್ದೆ ಎಲ್ಲಿಲ್ಲದೆ ಓದಿ ಹೋಯಿತು. ನಾನು ಬೇಗಬೇಗನೆ ರೆಡಿ ಆಗಿ ಹೊರಡುವಷ್ಟರಲ್ಲಿ 9.30 ಅಲ್ಲಿ security ಗೇಟ್ ನಲ್ಲಿ ಅಂತು ಸುಮಾರು 30-45 ಬೇಕಾಗುತ್ತದೆ ಅಂತ ನನಗೆ ಗೊತ್ತಿರಲಿಲ್ಲ, ನೋಡಿದರೆ ಅಲ್ಲಿ ಜನ ಸಂದಡಿ ಇತ್ತು, ಎಲ್ಲಿಂದ ಬಂದ ಜನರೆಲ್ಲರೂ ಒಳಗೆ ಹೋಗುವುದಕ್ಕೆ security ಪಾಸು ತೆಗೆದುಕೊಳ್ಳುತ್ತಿದರು.

ಆದಮೇಲೆ ನಾನು ಸುಮಾರು 11 ಘಂಟೆ ಆಯಿತು ಒಳಗೆ ಹೋಗಲು. ನನ್ನ ಮ್ಯಾನೇಜರ್ ಎಲ್ಲರಿಗು ಪರಿಚಯ ಮಾಡಿಸಿ ಕೊಟ್ಟ. ಆಮೇಲೆ ನನ್ನ ಸಹ ಉದ್ಯೋಗಿ ಅಂದರೆ ನಾನು ಯಾರನ್ನು replace ಮಾಡಲು ಬಂದಿದ್ದನೋ ಅವನೊಂದಿಗೆ ಎಲ್ಲ ವಿಷಯ ಕಲೆ  ಹಾಕುತ್ತ ಕೂತೆ, ಅವನು ಹೇಳಿದ ಕೆಲಸ ಏನು ಜಾಸ್ತಿ ಇಲ್ಲ ತಲೆ ಕೆಡಿಸಿ ಕೊಳ್ಳೋದು ಬೇಕಿಲ್ಲ. ನನ್ನ 2 ತಿಂಗಳಲ್ಲಿ ನಾನು ಬರಿ 2 ದಿನ ಮಾತ್ರ ರಾತ್ರಿ ಕೆಲಸ ಮಾಡಿದ್ದೇನೆ, ನಿನಗೂ ಹಾಗೆಯೇ ಇರುತ್ತೆ ಅಂದ. ನೋಡಿದರೆ ನನ್ನ ದುರದೃಷ್ಟಕ್ಕೆ 2 ನೆ ದಿನವೇ ನಾನು 1 ಘಂಟೆ ತನಕ ಕೆಲಸ ಮಾಡುವಂತೆ ಆಯಿತು. ಏನು ಮಾಡೋದು ನಮ್ಮ samsung work culture ರೇ ಹೀಗೆ.

ಆ ವಾರದ ಅಂತ್ಯದಲ್ಲಿ sapan ವಾಪಸು ಹೊರಟ ಭಾರತಕ್ಕೆ. ೨ನೆ ದಿನ ಬಿಟ್ಟರೆ ಮತ್ತೆ ಮುಂದೆ ಹಾಗೆ ಅಷ್ಟು ಹೊತ್ತು ಕೆಲಸವೇನು ಇರಲಿಲ್ಲ. ವಾರ  ಮುಗಿಯಿತು ಶನಿವಾರ ಅಶೋಕನಿಗೆ ಕೇಳಿದೆ ಎಲ್ಲಾದರೂ ಹೋಗೋಣ ಎಂದು ಆಟ ಕೆಲಸ ಇದೆ ಅದು ಇದು ಅಂತ ಹೇಳಿದ, ಹೋಗಲಿ ಬಿಡು ಅಂದುಕೊಂಡೆ, ಮತ್ತೆ ಭಾನುವಾರ ಕೂಡ ಅದೇ ನೆಪ ಹೇಳಿ ಜಾರಿಕೊಂಡ. ಕೊನೆಗೆ ನಾನು ಬಿಡಬೇಕಲ್ಲ ನನ್ನ ಕ್ಯಾಮೆರಾ ಮತ್ತು ಒಂದು ಸೈಕಲ್ ತೆಗೆದುಕೊಂಡು ಹಾಗೆ ಊರು ಸುತ್ತಲು ಹೊರಟೆ. ಹಾಗೆ ಊರು ನೋಡುತ್ತಾ ಎಲ್ಲಿ ಏನು ಸಿಗುತ್ತದೆ ಎಂದು ಹುಡುಕುತ್ತ ಹೊರಟೆ, ರಾತ್ರಿ ಆಗುತ್ತಾ ಬಂದಿತು ಸುಮಾರು 7 ಘಂಟೆ, ಅಲ್ಲಿ ಒಂದು bridge ಮೇಲೆ ಹೋಗಬೇಕಿತ್ತು, ನಾನು ಮೇಲೆ ಹತ್ತುವುದಕ್ಕು ಅಲ್ಲಿ ಅದರ lights on ಮಾಡುವುದಕ್ಕೂ ಸರಿ ಹೋಗಿತ್ತು, ತಿರುಗಿ ನೋಡಿದರೆ ಸುಂದರ ದೃಶ್ಯ ಕಂಡಿತು. ಫೋಟೋ ತೆಗೆಯಲು ಇದಕ್ಕಿಂತ ಒಳ್ಳೆ ಜಗ ಸಿಗಲ್ಲ ಅಂತ ಅಲ್ಲಿ ಸುಮಾರು 1 ಘಂಟೆ ಕೂತೆ. ಕಾಲ ಹೋದದ್ದೇ ಗೊತ್ತಾಗಿಲ್ಲ, ಅಂತು ಒಳ್ಳೆ photo ಗಂತೂ ಮೋಸ ಆಗಿಲ್ಲ.



 ಇನ್ನು ಎಷ್ಟೋ ತೆಗೆದೇ ಅದರಲ್ಲಿ ಇದು ನನಗೆ ತುಂಬಾ ಹಿಡಿಸಿದ್ದು.

ಕಾಲ ಕಲಿತ ಹೋಯ್ತು ನಾನು ಅಲ್ಲಿನ ಊಟ ತಿಂಡಿಗೆ adjust ಆಗ್ತಾ ಹೋದೆ, ಅಲ್ಲಿ gym ಇರುವ ಜಾಗ ತಿಳಿದುಕೊಂಡೆ ಅದರದೊಂದು ಸ್ವಾರಸ್ಯ ಕಥೆ ಇದೆ ಆಮೇಲೆ ಹೇಳ್ತೀನಿ ಕೇಳಿ .

ಒಂದು ದಿನ ಅಶೋಕನಿಂದ ಜಾಗ ತಿಳಿದು gym ಹುಡುಕಿ ಹೋದೆ. ಒಳಗೆ ಕಾಲು ಇಡುತ್ತಿದ್ದಂತೆ ಕಂಡಿದ್ದು "ಬೆತ್ತಲೆ ಜಗತ್ತು" ಅಲ್ಲಿ ಗಂಡಸರು ಬೆತ್ತಲೆಯಾಗಿ ಸ್ನಾನ ಮಾಡಿ ಕನ್ನಡಿಯ ಮುಂದೆ ನಿಂತಿದ್ದರು, ನಾನು ಒಂದು ಕಡೆ ತಿರುಗಿ ನೋಡಿ ಇದೇನಾ gym ಅಂತ ಖಾತ್ರಿ ಮಾಡಿಕೊಂಡು ಅಲ್ಲಿಂದ ಹಿಂದೆ ನೋಡದೆ ದೌಡು. ಯಾಕೆ ಕೇಳ್ತಿರ ನಂ ಪಜೀತಿ!!! ಆಮೇಲೆ ಅಶೋಕನಿಕೆ ಕೇಳಿದರೆ ಇದು ಅಲ್ಲಿ ಸಾಮಾನ್ಯ ಅದರಲ್ಲಿ ಏನು ಆಶ್ಚರ್ಯ ಪಡೋದು ಬೇಕಿಲ್ಲ ಅಂದ. ನಿನ್ನ ಪಾಡಿಗೆ ನೀನು ಮಾಡು ಅವರ ಪಾಡಿಗೆ ಅವರು ಹೋಗ್ತಾರೆ ಅಂದ. ಸರಿ ಮತ್ತೆ 2 ದಿನದ ನಂತರ ಮತ್ತೆ ಹೋಗಿ ಅಲ್ಲಿ workout ಶುರು ಮಾಡಿದೆ.

ತುಂಬಾ ದಿನಗಳ ನಂತರ ಮತ್ತೆ ಸಮಯ ಸಿಕ್ಕಿದೆ ಮುಂದುವರೆಸುವುದಕ್ಕೆ ,
ಬೆಳಿಗ್ಗೆ 7.30 ಮೊಬೈಲ್ ನಲ್ಲಿ ಪ್ರತಿ ೫ ನಿಮಿಷಕ್ಕೊಮ್ಮೆ alarm ಇಟ್ಟರೂ ಕೊನೆಗೆ ಏಳುವುದು 7 : 55 ಗೆ ನೇ 
ಎದ್ದು, ಸ್ನಾನ ಮುಗಿಸಿ ಹತ್ತು ಹದಿನೈದು ನಿಮಿಷ ಕನ್ನಡಿಯ ಮುಂದೆ ನಿಂತು ರೆಡಿ ಆಗುವುದಕ್ಕೆ ಬೇಕು,. ನಂತರ ಸರಿಯಾಗಿ 9 ಕ್ಕೆ ತಿಂಡಿ ತಿನ್ನಲು ಹೋಗುತ್ತಿದ್ದೆ ಅಲ್ಲಿಂದ ಆಫೀಸ್ ಗೆ ೧೦ ನಿಮಿಷ ಕಾಲ್ನಡಿಗೆ
ಆಮೇಲೆ 12 ; 45 ಗೆ ಮಧ್ಯಾನ್ನ ಊಟಕ್ಕೆ ಹೊರಡುವುದು, ರಮೇಶ್ ಶ್ರೀಮನೆನಿ mysingle ping ಮಾಡುತ್ತಿದ್ದರು,  ಜೊತೆಗೆ ಹೋಗುತ್ತಿದ್ದೆವು ಆ ಚಳಿಯಲ್ಲಿ ಮೈ ಮೇಲಿನ ಯಾವುದೇ ಚರ್ಮ ಗಾಳಿಗೆ ತಾಕದಂತೆ ಬಟ್ಟೆಯಲ್ಲಿ ಮುಚ್ಚಿಕೊಂಡು ಹೊರಡುತ್ತಿದ್ದೆವು. ಊಟ ಮಾಡಿ ಸುಮಾರು 1 : 30 ಗೆ ಸುಮಾರು ವಾಪಾಸ್ ಆಫೀಸ್.
ಮತ್ತೆ ಸಾಯಂಕಾಲ ಎಷ್ಟು ಬೇಗ ಆಗುತ್ತದೆಯೋ ಅಷ್ಟು ಬೇಗ ಕೆಲಸ ಮುಗಿಸುವುದಕ್ಕೆ ಪ್ರಯತ್ನಿಸಿ ಸುಮಾರು 8 ಕ್ಕೆ gym ಕಡೆ ದಾರಿ ಹುಡುಕುತ್ತಿದ್ದೆವು. ಅಲ್ಲೋ ಕೇಳಬೇಕೆ ಆ ಜಿಮ್ ನೋಡಿಕೊಳ್ಳುವ ತಾತಪ್ಪ ಒಬ್ಬ ಇದ್ದ ನಾವುಗಳು indians ಕಂಡರೆ ಸಾಕು ಉರಿದು ಬೀಳುತ್ತಿದ್ದ ಅದೇಕೋ ಏನೋ ನಾ ಕಾಣೆ. ನಮಗೆ ಅವನ ಕಷ್ಟ ಅರ್ಥವಾಗದಿದ್ದರೂ ನಾವುಗಳು ನಮ್ಮ ಕೆಲಸ ಮುಗಿಸಿ 9 ಕ್ಕೆ ಸರಿಯಾಗಿ ಹೊರಗೆ ಬಂದು ಬಿಡುತ್ತಿದ್ದೆವು. 
ಮತ್ತೆ ವಾಪಾಸ್ ರಾತ್ರಿ ಊಟ ಮುಗಿಸಿ ಅಲ್ಲಿಂದ ರೂಮಿಗೆ ಹೋಗಿ ಮಲಗಿದರೆ ಆ ದಿನ ಮುಗಿಯಿತು. 
 
ಇದು ನನ್ನ ನಿತ್ಯ ದಿನಚರಿ,

ಇಲ್ಲಿ ಇರುವ ತನಕ ನಾನು ಎಷ್ಟೊಂದು ಕೊರಿಯನ್ ಸಿನಿಮಾ ಗಳನ್ನು ನೋಡಿದೆ. ಅವರ ಸಿನಿಮಾದಲ್ಲಿ ಅದೇನೋ ಒಂದು ವಿಶೇಷತೆ ಇರುತ್ತದೆ. ನೋಡಿದವರಿಗೆ ಗೊತ್ತು ಅದಾ ಗಮತ್ತು.
Il Mare, the classic, 100 days with Mr arrogant, the classic, marying the mafia,love in between etc ಇನ್ನು ಅದೆಷ್ಟೋ ನೋಡಿದ್ದೇ, ಎಲ್ಲ ಮರೆತುಹೋಗಿದೆ .
ಟೈಮ್ ಪಾಸು ಗೆ ಎಲ್ಲ ವಾರ ಒಂದಲ್ಲ ಒಂದು ಜಾಗ ಸುತ್ತಾಡಿದೆ,
suwon fort -> beautiful pics, paaldalmoon (cloth market)
Seoul : Namsan tower, Dongdemoon 3 times (cloth market), yongsan (ice skating, & electronics market), namdemoon (souveneirs market),
ಇನ್ನು ಅಲ್ಲಿ ಇಲ್ಲಿ ಸುತ್ತಾಡಿದೆ, ನೆನಪು ಉಳಿದಿಲ್ಲ.

ಆ ದಿನ ಬಹುಶಃ ಎರಡನೆಯ ವಾರ ನಾನು ಇಲ್ಲಿಗೆ ಬಂದು, ಅಲ್ಲಿಯ ತನಕ ಎಲ್ಲು  ಹೊರಗೆ ಹೋಗಿರಲಿಲ್ಲ, ಆದ್ದರಿಂದ, ನಾನು ನನ್ನ ಪಾಡಿಗೆ ನಾನೇ ಸೈಕಲ್ ಹಿಡಿದುಕೊಂಡು ಸುಮ್ಮನೆ  ಕೋಟೆ ಹುಡುಕಿಕೊಂಡು ಹೊರಟೆ ನಮ್ಮ ರೂಮಿನಿಂದ ಸ್ವಲ್ಪ ದೂರವಿದ್ದರು ದಾರಿ ಅಷ್ಟು ಕಷ್ಟ ಇರಲಿಲ್ಲ ಒಂದೇ ರಸ್ತೆಯ, ಅಲ್ಲಿಂದ ಕೊನೆಯ ತನಕ ಹೋಗಿ ಅಲ್ಲಿ ಯಾರಿಗಾದರೂ ಕೇಳಿದರೆ ಹೇಳುತ್ತಾರೆ ಅಂತ ಹೇಳಿದ್ದ ನಮ್ ಅಶೋಕ, ಅಲ್ಲಿ ಹೋಗಿ ಕೇಳಿದರೆ ಅಲ್ಲ್ಲಿ ಯಾರಿಗೂ ಗೊತ್ತೇ ಇರಲಿಲ್ಲ ಅನ್ನುವುದಕ್ಕಿಂತ ಹೆಚ್ಚಾಗಿ ನಾನು ಹೇಳುವುದು ಅವರಿಗೆ ತಿಳಿಯುತ್ತ ಇರಲಿಲ್ಲ. ಎಷ್ಟೆಲ್ಲಾ ಕೈ ಸನ್ನೆ ಮಾಡಿ ಕೆಳಿದನೋ ಆ ದಿನ ನನಗೆ ಗೊತ್ತು. 
ಕೊನೆಗೆ ಸಿಕ್ಕೊಬ್ಬ ಅವನಿಗೆ ಹೋಗಿ ಕೇಳಿದಾಗ ಆ ಕಡೆ ಎಂದು ಕೈ ಮಾಡಿದ, ಕಷ್ಟ ಪಟ್ಟು ಹ್ಯಾಗೋ ಅಲ್ಲಿಗೆ ಹೋಗಲು ಹೊರಟೆ ನೋಡಿದರೆ ಅಲ್ಲಿ ಏನೂ ಇರಲ್ಲಿಲ್ಲ ನೋಡುವುದಕ್ಕೆ ದೂರದಿಂದಲೇ ನೋಡಿ ಹೊರತು ಬಂದು ಬಿಟ್ಟೆ. 

ಸುಮಾರು 2 ತಿಂಗಳು ಆಗುತ್ತಾ ಬಂದಿತ್ತು ನನ್ನ ಪ್ರವಾಸ ಮುಗಿದು ಆಗ ಚಳಿ ಜಾಸ್ತಿ ಆಗುತ್ತಾ ಬಂತು. ಎಲ್ಲರು ಹೇಳುವುವ ಹಾಗೆ ಇನ್ನು ಕೆಲವೇ ದಿನಗಳಲ್ಲಿ ಮಂಜಿನ ಮಳೆ ಯಾಗುವ ಸಾಧ್ಯತೆಗಳು ಇದ್ದವು. ಆದರೆ ನನಗಂತೂ ಅನಿಸುತ್ತಲೇ ಇರಲಿಲ್ಲ. 
ಒಂದು ದಿನ ಟಿವ ನಲ್ಲಿ ನೋಡುತ್ತಿದ್ದೆ ಉತ್ತರ ಕೊರಿಯಾ ದ ಉತ್ತರ ಪ್ರಾಂತ್ಯದಲ್ಲಿ ಮಳೆಯಾಗಿತ್ತು ಮತ್ತೆ ರಸ್ತೆಗಳೆಲ್ಲವೂ ಮಂಜಿನಿಂದ ಮುಚ್ಚಿ ಹೋಗಿತ್ತು. ಅದನ್ನು ನೋಡಿ ನಮ್ಮ ಅಡಿಗೆಯವನನ್ನು ಕೇಳಿದೆ ಅಲ್ಲಿಗೆ ಹೋದರೆ ನಮಗೆ ಆಡಲು ಸಾಧ್ಯವೇ ಅಂತ ಆಟ ಚೆನ್ನಾಗಿ ಆಡಬಹುದು. ಅಲ್ಲಿ ಅದಕ್ಕಾಗಿಯೇ ಪ್ರತ್ಯೇಕ ಸ್ಥಳ ಕೂಡ ಇದೆ ಅಂತ ಹೇಳಿದ್ದ ಅದರ ಪ್ರಕಾರವಾಗಿ ನಾನು ನನ್ನ ಆಫೀಸಿನ ಮ್ಯಾನೇಜರ್ ಗೆ ಕೇಳಿದೆ ಅಲ್ಲಿಗೆ ಹೋಗುವುದಕ್ಕೆ ಎಲ್ಲ ವಿವರವನ್ನು ಕೊಡುವುದಕ್ಕೆ ನಾಳಿನ ದಿನ ಏನೇ ಆಗಲಿ ಅಲ್ಲಿಗೆ ಹೋಗುವುದು ಖಂಡಿತ ಎಂದು ನಿರ್ಧಾರ ಮಾಡಿದ್ದೆ ನನ್ನ ಅದೃಷ್ಟಕ್ಕೆ ಅಂದು ರಾತ್ರಿ ಊಟ ಮುಗಿಸಿ ಮಾತನಾಡುತ್ತ ಕುಳಿತಿದ್ದೆವು ಎಲ್ಲಿಂದಲೋ ಜೋರಾಗಿ ಕಿರುಚಾಡುವ ಶಬ್ದ ಕೇಳಿಸುತ್ತಿತ್ತು. ಹೊರಗೆ ಹೋಗಿ ನೋಡಿದರೆ snow fall ಶುರುವಾಗಿ ತೆಳ್ಳಗಿನ ಮಂಜಿನ ಪದರ ನಿರ್ಮಾಣವಾಗಿತ್ತು ರಸ್ತೆಯ ಮೇಲೆ. ನೋಡಿದ ತಕ್ಷರ ಏನು ಅನಿಸದಿದ್ದರೂ ಒಂದು ರೀತಿಯ ಪುಲಕಿತ ಭಾವ ಮನದಲ್ಲಿ ಉಕ್ಕಿ ಬಂತು. ತಕ್ಷಣ ನನ್ನ ಮೊಬೈಲ್ ತೆಗೆದು ವೀಡಿಯೊ ಮಾಡಲು ಶುರು ಮಾಡಿದೆ. ವೀಡಿಯೊ ಮಾಡಿದರೇನು ಬಂತು ಆನಂದಿಸಬೇಕೆಂದು ರಸ್ತೆಯ ಮಧ್ಯ ಹೋಗಿ ನಿಂತು ಕುನಿದದುತ್ತಿದ್ದ ಗುಂಪಿನ ಜೊತೆ ಸೇರಿಕೊಂಡೆ 
ಅರ್ಧ ಘಂಟೆ ಕಳೆದ ನಂತರ ನಿಂತೇ ಹೋಯಿತು. ಇನ್ನೇನು ಮುಗಿಯಿತಲ್ಲ ಎಂದು ವಾಪಾಸ್ ನನ್ನ ರೂಮಿನ ಕಡೆ ಹಿಂದಿರುಗಿ ಹೋದೆ ಪ್ರತಿದಿನದ ಹಾಗೆ ಮುಖ ತೊಳೆದು ಕೊಂಡು ಶುಕ್ರುವರವದ್ದರಿಂದ ಫಿಲಂ ನೋಡಲು ಸಿದ್ದ ಮಾಡಿಕೊಂಡೆ. ರಾತ್ರಿ ಸುಮಾರಿ 10 ಘಂಟೆಗೆ ಅಶೋಕ ವಾಪಾಸ್ ಬಂದ ಆಗ ಹೇಳಿದ್ದ ಏನು ಮಂಜು ನೀನು ಇಲ್ಲೇ ಇದ್ದೀಯ ಹೊರಗೆ ಇಷ್ಟು ಜೋರು snow fall  ಆಗ್ತಾ ಇದಿಯಲ್ಲ ಅಂದ. ಆಗ ಕಿಟಕಿಯಿಂದ ಹೊರ ನೋಡಿದರೆ ಅಷ್ಟರಲ್ಲಿ ತುಂಬಾ ಮಂಜು ರಸ್ತೆಯನ್ನೆಲ್ಲ ಮುಚ್ಚಿಕೊಂಡಿತು. ತಕ್ಷಣ ಬಟ್ಟೆ ಬದಲಾಯಿಸಿ ಕ್ಯಾಮೆರಾ ಹಿಡಿದುಕೊಂಡು ಕೆಳಕ್ಕೆ ಹೊರತು ಹೋದೆ. ಅಲ್ಲೇ ನಿಂತು ಕೆಲವು ಚಿತ್ರ ತೆಗೆದು. ಮಂಜಿನ ಗದ್ದೆಯನ್ನು ಮಾಡಿ ಕೈಲಿ ಹಿಡಿದು ಅದರ ಆನಂದ ಪಡೆದೆ. ಸುಮಾರು 1 ಘಂಟೆಯ ವರೆಗೂ ಆಡುವವರನ್ನು ನೋಡುತ್ತಾ ಅಲ್ಲೇ ಇದ್ದೆ. ಅನಿಸಿತು ನಾನು ಒಳ್ಳೆಯ ಬಟ್ಟೆ ಹಾಕಿಕೊಂಡು ಮತ್ತೆ ಊರೆಲ್ಲ ಸುತ್ತೋಣ ಈಗಲೇ ಅಂತ. ಅಶೋಕ ಶೀಗ್ರ ಒಪ್ಪದೇ ಇದ್ದರು ನಂತರ ಹೊರಡಲು ರೆಡಿ ಆದ. ನಾನು ಮತ್ತೆ ಅವನು ಮುಖ್ಯ ರಸ್ತೆಯ ಕಡೆ ಹೊರಟೆವು. ದಾರಿಯ ಉದ್ದಕ್ಕೂ ಎಷ್ಟೊಂದು ಫೋಟೋಗಳನ್ನು ತೆಗೆಯುತ್ತ ಹೋದೆ . ಸುಮಾರು ರಾತ್ರಿ 2 ಘಂಟೆಯ ತನಕ ಫೋಟೋ session ನಡಿಯುತ್ತಲೇ ಇತ್ತು. ಮಳೆ ಯಾವಾಗ ಜೋರಯಿತೋ ನಾವಿಬ್ಬರು ವಾಪಾಸ್ ಹಿಂದೆ ಬಂದುಬಿಟ್ಟೆವು. ಅಶೋಕ ಹೇಳಿದ ನಾಳೆ ಖಂಡಿತ ಇದು ಎಲ್ಲ ಹಾಗೆಯೆ ಇರುತ್ತೆ ಮತ್ತೆ ನೀನು ಬೇಕಾದ್ದ ಹಗೆ ಆಡಬಹುದು ಅಂದಿದ್ದ ಅಂತೆಯೇ ನಾನು ಮುಂಜಾನೆ ಬೆಳಿಗ್ಗೆ ಏಳಲು ಅಣಿ ಮಾಡಿಕೊಂಡೆ. ಏಕೆಂದರೆ ಹೊತ್ತು ಕಳೆದು ಹೋದರೆ ಅದರ ಮೇಲೆ ಜನ ನಡೆದಾಡುತ್ತಾರೆ ಆಗ ಅವರ ಪಾದಗಳ ಗುರುತುಗಳೆಲ್ಲ ಬಿದ್ದು ಹೋಗುತ್ತೆ ಅಂದುಕೊಂಡಿದ್ದೆ .. ರಾತ್ರಿ  ಬೆಳಿಗ್ಗೆ   ಘಂಟೆ ನೋಡಿದರೆ 10.30  ತಕ್ಷಣ   ಹೋದೆ. ಅವಿನಾಶ್ ಅಂತ ಒಬ್ಬ ಹುಡುಗ ನನ್ನ ಜೊತೆ ಯಲ್ಲೇ ಪ್ರಯಾಣ ಮಾಡಿದ್ದ ಮತ್ತು ಆತ ಹೊಸ ಕ್ಯಾಮೆರಾ ಕೂಡ ಕೊಂದು ಕೊಂಡಿದ್ದ ಆದ್ದರಿಂದ. ನನ್ನ ಕ್ಯಾಮೆರಾದಲ್ಲಿ ಬಾರದ ಫೋಟೋ ಅವನದರಲ್ಲಿ ತೆಗೆಯಬಹುದು ಅಂತ ಅಂದುಕೊಂಡು ಆತನನ್ನು ಕರೆದು ಕೊಂದು ಹೊರಟೆ ಸುಮಾರು 2 ಘಂಟೆಯ ತನಕ ಫೋಟೋ ಗಳನ್ನೂ ತೆಗೆದು ಆಟವಾಡಿ ವಾಪಸ್ ಆಗುತ್ತಿದ್ದೆವು ಏಕೆಂದರೆ ಹೊಟ್ಟೆ ಹಸಿಯುತ್ತಿತ್ತು. ದಾರಿಯಲ್ಲಿ ಚಿಕ್ಕ ಮಕ್ಕಳು ಆಡುತ್ತಿರುವುದನ್ನು ಕಂಡು ಅವರ ಜೊತೆ ನಾವು ಸ್ವಲ್ಪ ಹೊತ್ತು ಅವರೊಡನೆ ಕಲ ಕಳೆದೆವು. ನಂತರ ತುಂಬಾ ಹೊತ್ತು ಆದರೆ ಊಟ ಮುಗಿದು ಹೋಗುತ್ತದೆಯಲ್ಲ ಎಂದು ತಿಳಿದು ವಾಪಾಸ್ ಹೋಗಿ ಬಿಟ್ಟೆವು. ಅಲ್ಲಿಗೆ ನನ್ನ snow fall ನೋಡುವ ಆಸೆ ಒಂದು ಹಂತಕ್ಕೆ ತೀರಿತು.


ಇಷ್ಟು snow fall ನೋಡಿದ ನಂತರ ನನ್ನ ಮ್ಯಾನೇಜರ್ ಹತ್ರ ಕೇಳಿದ್ದ ಎಲ್ಲ ವಿವರಗಳು ಬೆದವದವು. ಏಕೆಂದರೆ ಇಲ್ಲೇ ಎಲ್ಲ ನೋಡಿಬಿತ್ತಿದ್ದೆ . ಭಾನುವಾರದಂದು ಒಂದು ಬರಿ ಆಫೀಸ್ ಕಡೆಗೂ ಹೋಗಿ ನೋಡಿ ಬಂದೆ. ಅಲ್ಲಿ ಇದ್ದ ಎಲ್ಲ ಮಂಜಿನ ರಾಶಿಯನ್ನು crane ನಲ್ಲಿ ತೆಗೆದು ಹಾಕಿ ಮರಳಿ ಹಿಂದಿನ ಸ್ಥಿತಿಗೆ ಆಫೀಸ್ ನ ವಾತಾವರಣವನ್ನು ತರಲು ಪ್ರಯತ್ನಿಸುತ್ತಿದ್ದರು. .
ಅಂದಿನಿಂದ ಸುಮಾರು ಇನ್ನು 2-3 ವಾರಗಳ ತನಕ ಬಿದ್ದ snow  ಹಾಗೆಯೀ ಗಟ್ಟಿಯಾಗಿ ಬಿಟ್ಟಿತು. ನಡೆದಾಡಲು ಕೂಡ ಕಷ್ಟವಾಗುತ್ತಿ. ಅಂದು ಅಂದುಕೊಂಡೆ ಏಕೆ ಈ ಜನರಿಗೆ snow  fall  ಕಂಡರೆ ಇಷ್ಟು ವಿರಕ್ತಿ ಎಂದು. ಅವರೇ ಹೇಳಿದ ಹಾಗೆ ಬೀಳುವ ಮೊದಲನೆಯ ದಿನ ಮಾತ್ರ ಚಂದ ನಂತರ ಅದರಿಂದ ಉಂಟಾಗುವ ಪರಿನಮದಳು ಬಹಳ ಕಷ್ಟಜನಕ ವಾದದ್ದು.

ಈ ಬಾರಿ ಎಷ್ಟೊಂದು ಬಟ್ಟೆ ಗಳನ್ನೂ ನಾನು ಕೊಂಡು ಬಂದಿದ್ದೆ ಭಾರತಕ್ಕೆ ಹಿಂದಿರುಗುವಾಗ ಅವನ್ನೆಲ್ಲ ತರಲು ನಾನು night market ಗೆ ಹೋಗಿ ತಂದಿದ್ದೆ ಅಲ್ಲಿನ ವಾತಾವರಣ ಮತ್ತು ಜನರ ಜೀವನ ಶೈಲಿಯೇ ವಿಭಿನ್ನವಾದದ್ದು. ಬೆಳಿಗ್ಗೆ ಎಲ್ಲ ಏನು ಮಾಡುತ್ತಾರೋ ತಿಳಿಯದು ಆದರೆ ಶುಕ್ರುವರ ರಾತ್ರಿ ಅಂತು dongdemun ನಲ್ಲಂತೂ ಜನ ಜಾತ್ರೆಯೇ ಮೆರೆಯುತ್ತಿತ್ತು. ಅಬ್ಬಬ್ಬ ಎಷ್ಟೊಂದು ಜನ ನೋಡಿದರೆ ಇವರೆಲ್ಲ ಅದು ಹೇಗೆ ರಾತ್ರಿ ಎಲ್ಲ ಎದ್ದು ಇರುತ್ತಾರೋ ಎನಿಸುತ್ತದೆ. ಮತ್ತೆ ಇವರಿಗೆ ಇಷ್ಟೊಂದು ಬಟ್ಟೆಯ ಹುಚ್ಚು ಎಲ್ಲಿಂದ ಬಂತು ಅಂತ ಕೂಡ ಅನಿಸುವುದುಂಟು. ಸ್ವಲ್ಪ ಜನ ಸುಮ್ಮನೆ ಹಾಗೆ ಗೆಳೆಯರೊಡನೆ ತಿರುಗಾಡಲು ಬರುವುದುಂಟು. ಮತ್ತೆ ಕೆಲವರಂತೂ ಕೈ ತುಂಬಾ ಚೀಲಗಳು ಹೊತ್ತು ಸಾಮಾನುಗಳನ್ನು ಖರೀದಿ ಮಾಡುತ್ತಾರೆ..ನಾನು ಅಲ್ಲಿಗೆ 2 ಬಾರಿ ಹೋಗಿ ಬಟ್ಟೆಯನ್ನೆಲ್ಲ ತಗೆದುಕೊಂಡು ಬಂದಿದ್ದೆ. ನನ್ನ ಹತ್ತಿರ ಒಂದು ಒಳ್ಳೆಯ ಚಳಿಗಾಲಕ್ಕೆ ಸರಿಹೊಂದುವ jacket ಇಲ್ಲದಿರುವ ಕಾರಣ ಒಂದು ದುಬಾರಿ jacket ತೆಗೆದುಕೊಂಡು ಬಂದೆ. 80,000 wons ಕೊಟ್ಟು. ಅದನ್ನು ಹಾಕಿಕೊಂಡೆ ನಾನು ಅಂದು snow ಫಾಲ್ photos ತೆಗೆಸಿಕೊಂಡದ್ದು.


ಬರುವಾಗ ಅಲ್ಲಿಂದ 5 galaxyS ಫೋನ್ ಗಳನ್ನೂ ಕೂಡ ತಂದಿದ್ದೆ. ಬಂದು ಇಲ್ಲಿಗೆ ಬಂದು ಅವುಗಳ ಲ್ಲಿ ರಾಮಣ್ಣ, ಶ್ರೀಕಾಂತ್ ಅಣ್ಣ, ಮಾಮ , ರಘು ಅವರಿಗೆ ಕೊಟ್ಟು ಒಂದು ನನ್ನ ಹತ್ತಿರವೇ ಇತ್ತು ಕೊಂಡಿದ್ದೆ ಕಾಲ ಕ್ರಮೇಣ ನನ್ನ ಫೋನ್ ಕೂಡ ಕೊಟ್ಟು ಬಿಟ್ಟೆ ಇಷ್ಟವಾಗದ ಕಾರಣ. ಆ ಫೋನೆಗಳನ್ನು ತರುವುದು ಒಂದು ರೀತಿಯ ಕಷ್ಟ ಸಾಧನೆಯೇ ಸರಿಯಿತ್ತು, ಅಲ್ಲಿ ಒಂದು market ಇತ್ತು ರೈಲ್ವೆ ನಿಲ್ದಾಣದ ಹತ್ತಿರ ಅಲ್ಲಿ ಹೋಗಿ ಚೌಕಾಸಿ ಮಡಿ ತರಬೇಕಿತ್ತು. ಡಿಮ್ಯಾಂಡ್ ಇರುವಾಗ ಅದನ್ನು 2lk ಕೂಡ ಹೇಳುತ್ತಿದ್ದರು ಅದೇ ಫೋನ್ ಮುಂಚೆ 1.5L  ಗೆ ಕೊಡುತ್ತಿದರು. ಅದು ಹೇಗೆ ಮಡಿ ಎಲ್ಲ ಫೋನೆಗಳು 1.5L  ಮಾಡಿ ತಂದೆ. ನಮ್ಮ ದೇಶದ ಬೆಲೆ ಸುಮಾರು 8ಸಾವಿರದ ರೂ. ಅದನ್ನೆಲ್ಲ ಹೊತ್ತು ತಂದಿದ್ದು airport ನಿಂದ ಒಂದು ರೀತಿಯ smugglingಗೇ ಆಗಿ ಹೋಯಿತು.


what did you feel after reading