Monday, December 19, 2011

ಗಾದೆ ಗಂಗಯ್ಯ ನಾಟಕದ ಗಾದೆಗಳು (ಧೀರೇಂದ್ರ ಗೋಪಾಲ್ 'ರ ಕೊನೆಯ ನಾಟಕ)

೧. ಕೋಳಿ ಕಾಲ್ಗೆ ಗೆಜ್ಜೆ ಕಟ್ಟಿದ್ರೆ, ತಿಪ್ಪೆ ಕೆದ್ರೋದ್ ಬಿಟ್ಟಿತೆ??
೨. ಯಾಕೋ ಪುಟ್ಕೊಸಿ ನಾತ ಅಂದ್ರೆ, ನಾನ್ ಇರೋ ಜಾಗನೇ ಅಂಥದ್ದು ಅಂತಂತೆ ಆ ಜಾಗ!
೩. ಬೇವಿನ ಬೀಜವನ್ನು ಬಿತ್ತು ಮಾವಿನ ಮರ ಬಯಸಿದರಂತೆ !!
೪. ಕಾಗುಣಿತ ಬಾರದವನಿಗೆ ಕಾವ್ಯದ ಗೊಡವೆ ಯಾಕೆ?
೫. ಸಮಯಕ್ಕೆ ಬಾರದ ಬುದ್ಧಿ! ಅದು ಸಾವಿರ ಇದ್ದರು ಲದ್ದಿ!
೬. ಪರ್ವಥಯ್ಯನ ಮಗನಿಗೆ ಪ್ರಸ್ಥ ಆದ್ರೆ, ಮಂಚಯ್ಯನ ಮಗ ಮಂಚ ಸರಿ ಮಾಡಿಕೊಂಡನಂತೆ!
೭. ಗಂಡ ಇರೋವ್ಳು ಗಂಡು ಮಗ ಹೆತ್ತರೆ, ಗಂಡ ಸತ್ತವಳು ಚಡಪಡಿಸಿದಳು.
೮. ನಿಯಮ ಉಳ್ಳವನಿಗೆ ಕಂಡರೆ, ಆ ಯಮನಿಗೂ ಭಯವಂತೆ.
೯. ಒಳಗೆ ಮನಸ್ಸು ಉರಿಯಬಾರದು, ಮನೆಯ ಹೊರಗೆ ಬೆಂಕಿ ಉರಿಯಬರದು.
೧೦. ಪಕ್ಕದ ಮನೆಗೆ ಬೆಂಕಿ ಬಿದ್ದರೆ, ಪಾತ್ರೆ ತಗೊಂಡು ಹೋಗಿ ಕಾಯಿಸ್ಕೊಂಡು ಕುಡಿಯೋಣ ಅಂದರಂತೆ
೧೧. ಹುಚ್ಚು ಮುಂಡೆ ಮದ್ವೇಲಿ ಉಂಡೋನೆ ಜಾಣಅಂತೆ
೧೨. ಬಡ ದೇವರನ್ನ ಕಂಡ್ರೆ ಬಿಲ್ಲ್ಪತ್ರೆ ಬುಸ್ಸ್ ಅಂತಂತೆ !
೧೩. ಊರು ದನ ಕಾದು ಊರಿಗೆಲ್ಲ ದೊಡ್ಡ ಬೋರೆಗೌಡ ಅನ್ನಿಸ್ಕೊಂಡ ಅಂತೆ.
೧೪. ಬರಿ ಕೈ, ಕ್ಯಬೀ ನೈ
೧೫. ಇಟ್ಟದ್ದು ಕೊಳಿತದೆ. ಕೊಟ್ಟದ್ದು ಬೆಳಿತದೆ..
೧೬. ತಂದರೆ ನನ್ನ ಗಂಡ, ತರಗಿದ್ದರೆ ನನ್ನ ತಂಗಿಯ ಗಂಡ
೧೭. ತಕ್ಕಡಿಗೆ ಏನು ಗೊತ್ತು ಆ ಸಕ್ಕರೆಯ ಬೆಲೆ.
೧೮. ನವಿಲು ಪುಕ್ಕ ತೆರೆದ್ಕೊಂದು ಕುಣಿಯೋದನ್ನ ನೋಡಿ, ಕೆಂಭೂಥ ಪುಕ್ಕ ತೆರ್ಕೊಂಡು ಕುಣಿತಂತೆ
೧೯. ಅಪ್ಪನ ಸಂಪಾದನೆ ಮಗನಿಗೆ ತೃಣ ಸಮಾನವಂತೆ!
೨೦. ಹುಟ್ಟು ಹುಟ್ಟುತ ಅಣ್ಣ ತಮ್ಮಂದಿರು, ಬೆಳಿ ಬೆಳಿತ ದಾಯಾದಿಗಳು.
೨೧. ಜಗಳ ಮಾಡೋವ್ರು ಇದ್ದಾರೆ ಜಾಗ ಬಿಡೋದೇ ಒಳ್ಳೇದು
೨೨. ದಿಕ್ಕೆಟ್ಟ ದರ್ಬೇಸಿಗೆ ಯೋಗ ಯಾವ್ದು ಭೋಗ ಯಾವ್ದು
೨೩. ದೀಪ ಇದ್ದಕಡೆ ಬೆಳಕು
೨೪. ಆರು ಹೆತ್ತವಳ ಮುಂದೆ, ಮೂರು ಹೆತ್ತವಳು ಯಾವ ಲೆಕ್ಕ
೨೫. ಮನುಷ್ಯ ಕೊಟ್ಟಿದ್ದು ಮನೆತನಕ ... ದೇವ್ರು ಕೊಟ್ಟಿದ್ದು ಕಡೇ ತನಕ .
೨೬. ಹೆಗಲ್ ಮ್ಯಾಲ ಹೊತ್ತ ಮಗ ! ಬೆಳೆದ ಮೇಲೆ ಎಗರಿ ಒದ್ದ !!
೨೭. ನೀತಿ ಹೇಳಕೆ ನ್ಯಾವಂತನಿಗೆ ಕರ್ಸಿದ್ರೆ ? ಆತನೇ ಹೆಂಡ್ತಿ ಬಿಟ್ಟು ಆರು ತಿಂಗಳಿಗೆ ಆಗಿತ್ತಂತೆ.
೨೮. ಆಸೇನೆ ದುಃಖಕೆ ಸಮಾನ ! ಆಸೆ ಇಲ್ಲದವನು ಹರನಿಗೆ ಸಮಾನ
೨೯. ಸೌಟು ಬಲ್ಲದೆ ಸಾರಿನ ರುಚಿ??
೩೦. ಲಿಂಗಕ್ಕೆ ಭೇದವಿಲ್ಲ, ಗಂಗೆಗೆ ಮಡಿಯಿಲ್ಲ(ಬೇಸರ)
೩೧. ಗೆದ್ದರೆ ಆಡಕೆ ಬಂದಿದ್ದೆ ಅಂತಾರೆ, ಸೋತರೆ ನೋಡೋಕೆ ಬಂದಿದ್ದೆ ಅಂತಾರೆ
೩೨. ಯಾರು ರಾಜ್ಯ ಆಳಿದರು ರಾಗಿ ಕಲ್ಲು ಬೀಸೋದು ತಪ್ಪುತ್ತಾ ?
೩೩. ಊದ್ಗಡ್ಡಿ  ಹತ್ತಿಸ್ಕೊಂಡು ಬಾ ಅಂದ್ರೆ, ಊರೆಲ್ಲ ಹತ್ತಿಸ್ಕೊಂಡು ಬಂದನಂತೆ!
೩೪. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ!
೩೫. ಕಲ್ತಿದ್ದು ಬಿಡೆ ಕಳಮುಂಡೆ ಅಂದ್ರೆ , ನಡು ನೀರನಲ್ಲಿ ಬಿಟ್ಟು ಬಾಯಿ ಬಡ್ಕೋಳ್ಲಾ ಅಂದ್ಳಂತೆ.
೩೬. ಹೆಂಡ ಕುಡಿಯೋ ದೇವರಿಗೆ ಖಂಡ ತಿನ್ನೋ ಪೂಜಾರಿ ಸಿಗಾಕ್ಕೊಂಡ
೩೭. ಹಸ್ತ ನಕ್ಷತ್ರದ ಮಳೆ ಎತ್ತ್ಲಿನ್ದನೋ ಬರುತ್ತೆ.
೩೮. ಸೂಜಿಯ ಹಿಂದೆ ದಾರ, ಮದುವೆಯ ಹಿಂದೆ ತಾಪತ್ರಯ
೩೯. ಜಗಳ ಗಂಡರ ಬಾಳು , ಕಡೇ ತನಕ ಹಾಳು, ಇದನ್ನ ತಿಳ್ಕೊಂಡು ಸಂಸಾರ ಸಾಗಿಸ್ಕೊಂದು ಹೋಗ್ಬೇಕು ಅಂತಾರೆ ಜಾಣರು
೪೦. ಮಾತಾಡ್ತಾ ಮಾತಾಡ್ತಾ ಜಗಳ , ಹತ್ತುತ ಹತ್ತುತ ಬೆಂಕಿ .
೪೧. ತಡೆದು ಮಾತನಾಡಿದರೆ ಜಗಳವಿಲ್ಲ
೪೨. ಕಿಡಿ ಇಲ್ಲದೆ ಬೆಂಕಿ ಇಲ್ಲ, ಕಾರಣವಿಲ್ಲದೆ ಜಗಳವಿಲ್ಲ
೨೩. ತುಪ್ಪದ ಆಸೆಗೆ ಕತ್ತಿಯನ್ನು ನೆಕ್ಕೋ ನಾಯಿ
೪೪. ಮಾತು ಮನೆ ಕೆಡಿಸ್ತು ತೂತು ಒಲೆ ಕೆಡಿಸ್ತು
೪೫. ಬುದ್ಧಿ ಭೂಮಿ ಆಳತ ಇದ್ದ್ರೆ, ಅದೃಷ್ಟ ಕತ್ತೆ ಕಾಯ್ತಾ ಇರುತ್ತೆ ಅಂತೆ.
೪೬. ರೀತಿ ತಪ್ಪಿದರು ನೀತಿ ಇರಬೇಕು
೪೭. ಗಂಡಸರ ಕೈಯಲ್ಲಿ ಕೂಸು ನಿಲ್ಲುವುದಿಲ್ಲ, ಹೆಂಗಸರ ಕೈಯಲಿ ಮಾತು ನಿಲ್ಲುವುದಿಲ್ಲ
೪೮. ಗಂಡಸರಿಗೆ ಸಾಲ ಮುಳಿವು, ಹೆಂಗಸರಿಗೆ ಹಾದರ ಮುಳಿವು
೪೯. ಸಂಸಾರ  ಗುಟ್ಟು , ವ್ಯಾಧಿ ರಟ್ಟು
೫೦. ಗಂಡ ಬೈದರೆ ಹುಚ್ಚು , ಮಿಂಡ ಬೈದರೆ ಮೆಚ್ಚು
೫೧. ಗಂಡನಿಗೆ ಅಂಜದ ನಾರಿ, ಹೆಮ್ಮಾರಿ.
೫೨. ನೀತಿ ಇಲ್ಲದ ಹೆಣ್ಣು , ಜ್ಯೋತಿ ಇಲ್ಲದ ಮನೆ .. ಎರಡು ಒಂದೇ
೫೩. ಯೋಗ್ಯರಿದೆ ಇದು ಕಾಲವಯ್ಯ
೫೪. ಜೋಗಿ ಜೋಗಿ ತಬ್ಬಿಕೊಂಡರೆ, ಮಯ್ಯಲ್ಲಾ ಬೂದಿ
೫೫. ಅಟ್ಟು ಉಂಡರೆ ನರರ ಕಾಟ.. ತಿರಿದು ಉಂಡರೆ ನಾಯಿಗಳ ಕಾಟ !!



 

No comments:

what did you feel after reading